ಹಾಂಗ್-ಕಾಂಗ್ ಮಾರ್ಕೆಟಿಗೆ ಹೋಗಿ ತರಕಾರಿವುದೆಂದರೆ ಅದೇನೋ ಖುಶಿ. ನಮ್ಮ ಅಡಿಕೆತೋಟದಲ್ಲಿ ಸುತ್ತಿ ತರಕಾರಿ ತಂದ ಹಾಗೆ. ಮಲೆನಾಡಿನ ತರಕಾರಿಗಳು ಕೆಲವೊಮ್ಮೆ ಬೆಂಗಳೂರಿನಲ್ಲೂ ಸಿಗದೇ ಹೋಗಬಹುದು ಆದರೆ ಇಲ್ಲಿ ಸಿಗುತ್ತದೆ. ಹಾಲುಕುಂಬಳ, ಗೋವೆಕಾಯಿ, ನಾಲಿಗೆಸವತೆ ಇಂಥವುಗಳ ಜೊತೆಗೆ ಬಸಳೆ ಸೊಪ್ಪು, ತೊಂಡೆಕಾಯಿ, ಅಂಬೆಕೊಂಬು, ಸಣ್ಣಕ್ಕಿಎಲೆ ಸೊಪ್ಪು, ಕಳಲೆ ಇಂಥವುಗಳು ಲಭ್ಯ.ಇಲ್ಲಿ ಸಿಗುವ ಮಾವಿನ ಹಣ್ಣಂತೂ ಅಟ್ಟದಮೇಲೆ ಹುಲ್ಲುಹಾಕಿ ಹಣ್ಣಾಗಿದ್ದನ್ನು ತಿಂದಷ್ಟೇ ರುಚಿ. ಮಲೆನಾಡಿನ ತರಕಾರಿಗ ರುಚಿಗೆ ನಾವೊಂದೇ ಅಲ್ಲ. ಚೈನಿಸರು ಮಾರುಹೋಗಿದ್ದಾರೆ.ಆದರೆ ಜಿರಳೆ, ಹಾವು ಇಂಥವುಗಳ ಜೊತೆ ಹೇಗೆ ಬೆರೆಸಿ ಅಡುಗೆ ಮಾಡುತ್ತಾರೆಂದು ನನಗೆ ಗೊತ್ತಿಲ್ಲ














Saturday, July 18, 2009
Subscribe to:
Post Comments (Atom)
ಶಾಂತಲಾ....
ReplyDeleteತರಕಾರಿಗಳನ್ನು ನೋಡಿ ಬಾಯಲ್ಲಿ ನೀರು ಬಂತು...
ಸುಂದರ ಫೋಟೊಗಳು...
ಚಿಕ್ಕದಾದ..
ಚೊಕ್ಕ ಒಕ್ಕಣಿಕೆ ಇಷ್ಟವಾಯಿತು...
ಇನ್ನಷ್ಟು ಬರೆಯಿರಿ...
ಅಭಿನಂದನೆಗಳು...
ಎಷ್ಟೊ೦ದು ಚೆನ್ನಾಗಿ ಇದೆಯಲ್ಲಾ....ತರಕಾರಿಗಳು......?ಚಿಕ್ಕ ಬರಹದಡಿಯಲ್ಲಿ ಚೊಕ್ಕ ತರಕಾರಿಗಳು.......!!!!!!!!!!!
ReplyDeleteಶಾಂತಲಾವ್ರೆ...ಹಾಂಕಾಂಗ್ ಬಜಾರಿನಲ್ಲಿ ನಮ್ಮ ದೇಶೀಯ ದಿನಸಿ ಸಿಗುತ್ತ? ನಮ್ಮ ಮಸಾಲೆಗಳು ಇತ್ಯಾದಿ??
ReplyDeleteನಿಮ್ಮ ಬ್ಲಾಗಿಗೆ ಬಂದ ತಕ್ಷಣ ತರಕಾರಿಗಳ ದರ್ಶನ....ಮತ್ತು ವಿದೇಶೀ ಮಾರ್ಕೆಟ್...
ಸುಂದರವಾದ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.........
ReplyDeleteಜಲನಯನ ಅವರೇ........ ಕೆಲವೊಂದು ಚೈನಿಸ್ ಮಾರ್ಕೆಟ್ ಗಳಲ್ಲಿ ನಮ್ಮ ಮಸಾಲಾ,ಕಾಳು, ಬೇಳೆ ಎಲ್ಲ ಸಿಗುತ್ತದೆ... ಕೆಲವೊಂದು ಕನ್ನಡದಲ್ಲೂ ಬರೆದಿರುತ್ತದೆ. ಬಹುಷಃ ಭಾರತೀಯರು ಮಾತ್ರ ಕೊಳ್ಳುತ್ತಾರೆ.
ReplyDeleteಬರೀದೆ ಎಷ್ಟು ದಿನ ಆತೆ? ಬರಿಯೇ ಮಾರಾಯ್ತಿ!.
ReplyDeleteOrganic vegetables?
ReplyDeleteಅತೀ ಉತ್ತಮ ವಿವರಣೆ.. ಧನ್ಯವಾದ
ReplyDeletewww.firstpostkannada.com